The Devotion of Raidas - 文化传统

The Devotion of Raidas

故事简介

Discover the legendary tale of Raidas, a humble cobbler in Kashi whose simple faith performed miracles. When a proud scholar mocks his lifestyle, Mother Ganga herself intervenes to show that true purity lies in a devoted heart, not just in ritual baths. This soul-stirring story celebrates the power of honest labor and unwavering love for the divine.

评分:评分人数不足
语言:英文
发布日期:
阅读时间:1 分钟

关键词

生成提示词

ರಯಿದಾಸನ ಭಕ್ತಿ ಕಾಶಿಯಲ್ಲಿ ‘ರಯಿದಾಸ’ನೆಂಬ ಭಕ್ತನಿದ್ದ. ವೃತ್ತಿಯಲ್ಲಿ ಆತ ಚಮ್ಮಾರ. ತನ್ನನ್ನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡಾಗಲು ಆತ ದೇವರನಾಮವನ್ನು ಮನದಲ್ಲಿ ಜಪಿಸುತ್ತಲೇ ಇರುತ್ತಿದ್ದ. ಆತನ ಭಕ್ತಿಯ ಪರಾಕಾಷ್ಟತೆಯು ಕಾಶಿಯನಾಲ್ಕುದಿಕ್ಕಿನಲ್ಲಿಪ್ರಸಿದ್ಧವಾಗಿತ್ತು. ಒಮ್ಮೆ ಒಬ್ಬ ಪಂಡಿತ, ಭಕ್ತ ರಯಿದಾಸನನ್ನು ಭೇಟಿಯಾಗಲು ಬಂದ. ಭಕ್ತ ಶಿರೋಮಣಿ ರಯಿದಾಸನ ದರ್ಶನ ಪಡೆದು ಧನ್ಯನಾಗಲು ಆತ ಇಚ್ಛಿಸಿದ್ದ. ಚರ್ಮದ ತೊಗಲನ್ನು ಹದಗೊಳಿಸುತ್ತ ದೇವರ ಸಂಕೀರ್ತನೆಯಲ್ಲಿ ತಲ್ಲೀನನಾದ ರಯಿದಾಸನನ್ನು ಕಂಡ. ಈ ದೃಶ್ಯ ಕಂಡ ಪಂಡಿತನ ಮನವು ಭಕ್ತಿ ಭಾವದಿಂದ ತುಂಬಿ ಬಿಟ್ಟಿತು. ಆತ ವಿನಮ್ರನಾಗಿ ರಯಿದಾಸನಿಗೆ ನಮಸ್ಕರಿಸಿದ. ಇಬ್ಬರುಕುಶಲೋಪರಿಯಾಗಿ ಮಾತನಾಡಿದರು. ಆಗ ಪಂಡಿತ ಮಾತಿನ ಮಧ್ಯೆ ಕೇಳಿದ‘ಸಂತರೇ, ನೀವೆಷ್ಟುಪುಣ್ಯವಂತರು, ಕಾಶಿಯಲ್ಲೇನಿಮ್ಮವಾಸ. ಪಾಪನಾಶಿನಿ ಗಂಗೆಯ ತಟದಲ್ಲೇನಿಮ್ಮಬಿಡಾರ. ಹಾಗಾಗಿ ಗಂಗೆಯಲ್ಲಿಪವಿತ್ರಸ್ನಾನಗೈಯುವ ಅವಕಾಶನೀವುಬಯಸಿದಾಗಸುಲಭವಾಗಿ ದೊರೆಯುವುದು. ನೀವೆಷ್ಟುಬಾರಿ ಗಂಗಾಸ್ನಾನಮಾಡಿರುವಿರಿ?' ಎಂದುಪ್ರಶ್ನಿಸಿದ. ಚಮ್ಮಾರಸಂತ ರಯಿದಾಸ ಶಾಂತವಾಗಿ ಹೇಳಿದ ‘ಮಹೋತ್ತಮರೇ, ನಾನು ಇದುವರೆಗೂ ಗಂಗೆಯಲ್ಲಿ ಮಿಂದಿಲ್ಲ. ಗಂಗಾ ಸ್ನಾನ ಮಾಡಿಲ್ಲ' ಎಂದ. ರಯಿದಾಸನ ಮಾತನ್ನು ಜೀರ್ಣಿಸಿಕೊಳ್ಳಲು ಆ ಪಂಡಿತನಿಗೆ ಆಗಲಿಲ್ಲ.‘ಇದೆಂಥ ವಿಡಂಬನೆ, ತಮ್ಮ ಜೀವಿತದಲ್ಲಿ ಒಮ್ಮೆಯಾದರು ಗಂಗೆಯಲ್ಲಿ ಮುಳುಗಿ ತಮ್ಮ ಪಾಪ ತೊಳೆದುಕೊಳ್ಳಲು ಜನ ಸಾಮಾನ್ಯರು ಬಯುಸುತ್ತಾರೆ. ಕಾಶಿಯಲ್ಲೇ ಇದ್ದು ದಿನಾ ಗಂಗಾ ಸ್ನಾನ ಮಾಡುವ ಅವಕಾಶವಿದ್ದರೂ ಈ ರಯಿದಾಸ ತಾನು ಇದುವರೆಗೆ ಗಂಗಾಸ್ನಾನವನ್ನು ಮಾಡೇ ಇಲ್ಲ ಎನ್ನುತ್ತಿರುವನಲ್ಲ, ಇವನೆಂಥ ಭಕ್ತ? ಯಾರೋ ಹೇಳಿದರೆಂದು ನಾನು ಎದ್ದು ಬಿದ್ದು ಇವನ ದರ್ಶನ ಲಾಭಕ್ಕಾಗಿ ಕಾತರಿಸಿದೆನಲ್ಲ, ತಾನು ತಪ್ಪು ಮಾಡಿಬಿಟ್ಟೆ' ಎಂದು ಪರಿತಪಿಸಿದ ಆ ಪಂಡಿತ. ‘ಸ್ವಾಮೀ ನಿಮ್ಮನ್ನು ಮಹಾ ಸಂತನೆAದು ತಿಳಿದು ನಿಮ್ಮ ಆಶೀರ್ವಾದ ಪಡೆಯಲು ಬಂದೆ. ಆದರೆ ನೀವು ಇಲ್ಲೇ ಇದ್ದು ಗಂಗಾ ಸ್ನಾನ ಮಾಡದಂತಹ ನಾಸ್ತಿಕರಾಗಿದ್ದೀರಿ. ನಿಮ್ಮ ದರ್ಶನದಿಂದ ನನಗೆ ಪುಣ್ಯವಲ್ಲ,ಪಾಪ ಅಂಟಿ ಬಿಟ್ಟಿತು. ನಾನೀಗಲೇ ಗಂಗೆಯಲ್ಲಿ ಮಿಂದು ನನ್ನ ಈ ಪಾಪ ತೊಳೆದುಕೊಳ್ಳಲು ಹೋಗುತ್ತೇನೆ..ಛೆ ಎಂಥಹ ಅನರ್ಥವಾಗಿ ಬಿಟ್ಟಿತು' ಎಂದು ತಿರಸ್ಕಾರ, ಸಿಟ್ಟಿನಿಂದ ತಿರುಗಿ ದಪದಪ ಹೆಜ್ಜೆ ಹಾಕುತ್ತಾ, ಜುಟ್ಟು ಕುಣಿಸುತ್ತಾ ಹೊರ ನಡೆದ. ಆಗ ರಯಿದಾಸ ಪಂಡಿತನನ್ನು ಕೂಗಿ ಕರೆದು ‘ಮಹನೀಯರೇ ನಿಲ್ಲಿ ಸ್ವಲ್ಪ, ಹೇಗೂ ಗಂಗಾ ಸ್ನಾನಕ್ಕೆ ತೆರಳುತ್ತಿರುವಿರಿ. ನನ್ನ ಕೆಲಸವೊಂದನ್ನು ಮಾಡಿ ಬಿಡಿ. ಇಗೋ, ಈ ಅಡಿಕೆಯನ್ನು ನನ್ನ ಕಾಣಿಕೆಯಾಗಿ ಗಂಗಾಮಾತೆಗೆ ನೀಡಿ ಬಿಡಿ' ಎಂದು ಅಡಿಕೆಯೊಂದನ್ನು ಪಂಡಿತನಿಗೆ ನೀಡಿದ. ಪಂಡಿತ ನೋಡಿದ ‘ಗಂಗೆಗೆ ಅಡಿಕೆಯ ಕಾಣಿಕೆ!! ಈತನಿಗೆ ತಲೆಕೆಟ್ಟಿದೆ. ಆಘನಾಶಿನಿ ಗಂಗೆಗೆ ಇಂತಹ ಕ್ಷುಲ್ಲಕ ವಸ್ತುವಿನ ಉಡುಗೊರೆ. ಶುದ್ಧ ಅನಾಗರೀಕ ಈತ....ಆದರೆ ನನಗೇನಂತೆ? ಅವನ ಪಾಪ ಅವನನ್ನು ತಿನ್ನುವುದು. ಗಂಗೆಗೆ ಕಾಣಿಕೆ ಕೊಡುವಷ್ಟಾದರುಶ್ರದ್ಧೆ ತೋರಿದನಲ್ಲ. ಏನೂ ಮಾಡಲಾಗದು ಎಂದುಹೇಳಿನಾನೇಕೆಪಾಪ ಕಟ್ಟಿಕೊಳ್ಳಲಿ” ಎಂದು ರಯಿದಾಸನಿಂದ ಅಡಿಕೆ ತೆಗೆದುಕೊಂಡು, ತಿರುಗಿ ನೋಡದೇಭರಭರನೆ ಗಂಗಾನದಿಯತ್ತ ಹೊರಟ. ಗಂಗೆಯಲ್ಲಿ ಮುಳುಗಿ ಸ್ನಾನ ಮಾಡಿದ ಮೇಲೆ ಪಂಡಿತನಿಗೆ ನಿರಾಳವಾಯಿತು. ‘ಅಬ್ಬ ಆ ನಾಸ್ತಿಕನ ಮುಖ ನೋಡಿದ ಪಾಪ ಕಳೆಯಿತು' ಎಂದು ನೆಮ್ಮದಿಯ ಉಸಿರುಬಿಟ್ಟ. ಆಗ ಅವನಿಗೆ ಅಡಿಕೆಯ ನೆನಪಾಯಿತು. ಸರಿ ಇದನ್ನು ಗಂಗೆಗೆ ಅರ್ಪಿಸಿಬಿಟ್ಟರೆ ನನ್ನ ಹಾಗೂ ರಯಿದಾಸನ ಸಂಬAಧ ಮುಗಿದಂತೆ ಎಂದುಕೊಳ್ಳುತ್ತಾ ರೊಯ್ಯೆಂದು ಅಡಿಕೆಯನ್ನು ನದಿಗೆ ತೂರಿ ಒಗೆದ. ಆಗ ಆಶ್ಚರ್ಯವೊಂದು ನಡೆಯಿತು. ನದಿಯಿಂದ ಕೈಯೊಂದು ಮೇಲೆದ್ದಿತು. ಹಾಗೂ ಆತನಿಂದ ಆಡಿಕೆಯನ್ನು ತಾನೇ ಪಡೆದುಕೊಂಡಿತು. ಪಂಡಿತ ತಬ್ಬಿಬ್ಬಾದ.‘ಏನಾಗುತ್ತಿದೆ ಇಲ್ಲಿ? ಇದು ಗಂಗಾ ಮಾತೆಯ ಕರವಲ್ಲವೇ? ಆ ಪಾಪಿ ರಯಿದಾಸನ ಯಃಕಶ್ಚಿತ್ ಕಾಣಿಕೆ ಪಡೆಯಲು ಸ್ವತಃ ಗಂಗೆ ತನ್ನ ಕೈಯಿತ್ತಿದಳಲ್ಲ' ಎಂದು ಆಶ್ಚರ್ಯಪಡುತ್ತಾ ನಿಂತಿರಲು ಅದೇ ಗಂಗೆಯ ಇನ್ನೊಂದು ಕರವು ಮೇಲೆದ್ದಿತು. ಅಶರೀರವಾಣಿಯೊಂದು ಆಗಸದಲ್ಲಿ ಮೊಳಗಿತು. ‘ಎಲೈ ಪಂಡಿತನೇ, ರಯಿದಾಸ ನೀಡಿದ ಕಾಣಿಕೆಗೆ ಬದಲಾಗಿ ನಾನು ಈ ಕಲಾತ್ಮಕ ಕಂಕಣವನ್ನು ಉಡುಗೊರೆಯಾಗಿ ಆತನಿಗೆ ನೀಡುತ್ತಿದ್ದೇನೆ. ಇದನ್ನು ಆತನಿಗೆ ತಲುಪಿಸಿಬಿಡು’ ಎಂದಿತು. ಪಂಡಿತನಿಗೆ ಏನು ಅರ್ಥವಾಗಲಿಲ್ಲ. ಗಂಗೆ ಆ ನಾಸ್ತಿಕನಿಗೆ ಇಂತಹ ಉಡುಗೊರೆ ನೀಡುವುದೇ? ಅದರಲ್ಲೂ ಒಮ್ಮೆಯೂ ಗಂಗೆಯಲ್ಲಿ ಸ್ನಾನ ಮಾಡದ ಭಕ್ತಹೀನನಿಗೆ?' ಎಂದು ಯೋಚಿಸುತ್ತಿರಲು ಅವನ ದೃಷ್ಟಿ ಕೈಯಲ್ಲಿದ್ದ ಕಡಗದತ್ತ ಹೋಯಿತು. ಅದೊಂದು ಮುತ್ತು ರತ್ನ ವಜ್ರ ವೈಢೂರ್ಯಗಳಿಂದ ಕೆತ್ತಿದ ಅಮೂಲ್ಯವಾದ ಬಳೆಯಾಗಿತ್ತು. ಅದರ ಕೈ ಕೆಲಸ ಅದ್ಭುತವಾಗಿತ್ತು. ಫಳಫಳಿಸುತ್ತಿದ್ದ ಕಡಗವು ಅವನನ್ನು ಮೋಹಿತಗೊಳಿಸಿತು.‘ಈ ಕಡಗ ಆ ಚಮ್ಮಾರನಿಗೆ ಕೊಡುವುದೇ? ಎಲ್ಲವನ್ನು ಬಿಟ್ಟ ಅವನಿಗೇಕೆ ಬೇಕು ಈ ಕಡಗ? ಈ ಕಡಗವನ್ನು ಕಾಶೀರಾಜನಿಗೆ ನೀಡಿದರೆ ತನಗೆ ಭರ್ಜರಿ ಉಡುಗೊರೆ ಸಿಗಬಹುದು. ಹೇಗೂ ರಯಿದಾಸನಿಗೆ ಗಂಗೆ ಆತನಿಗಾಗಿ ಈ ಅಪೂರ್ವ ಬಳೆ ನೀಡಿದುದು ತಿಳಿದಿಲ್ಲವಲ್ಲ' ಎಂದುಕೊAಡು ಕಡಗ ತೆಗೆದುಕೊಂಡು ಕಾಶೀರಾಜನ ಬಳಿ ಹೋಗಿ ಆತನಿಗೆ ಅದನ್ನು ಉಡುಗೊರೆಯಾಗಿ ಇತ್ತ. ಅರಸ ಕಡಗವನ್ನು ಕುತೂಹಲದಿಂದ ವೀಕ್ಷಿಸುತ್ತಿರಲು, ಆತನ ಬಳಿ ಆಸೀನಳಾದ ರಾಣಿಯು ಕಡಗದ ವಿಶೇಷಸೊಬಗಿನಿಂದ ಆಕರ್ಷಿತಳಾಗಿ ಅದನ್ನು ರಾಜನ ಕೈಯಿಂದಪಕ್ಕನೆ ಕಸಿದುಕೊಂಡು ಅವಲೋಕಿಸತೊಡಗಿದಳು. ಅದರಸೌಂದರ್ಯಕ್ಕೆಮಾರುಹೋದ ಅವಳು ರಾಜನಲ್ಲಿ‘ನನಗೆ ಇಂತಹುದೇ ಇನ್ನೊಂದು ಕಡಗ ಬೇಕು. ಆಗ ನನ್ನ ಎರಡು ಕೈಯ ಶೋಭೆ ಹೆಚ್ಚುವುದು' ಎಂದಳು. ಮಹಾರಾಣಿಯ ಅಪೇಕ್ಷೆಯನ್ನು ರಾಜ ಹೇಗೆ ತಳ್ಳಿ ಹಾಕಿಯಾನು? ಎಲ್ಲಿಂದ ತಂದೆ ಈ ಕಡಗವನ್ನು ಎಂದು ರಾಜ ಕೇಳಿದ ಪ್ರಶ್ನೆಗೆ ಆತ ಭೂಮಿಯಲ್ಲಿ ತನಗೆ ಸಿಕ್ಕಿದುದು ಎಂದು ಸುಳ್ಳು ಹೇಳಿದ. ರಾಜ‘ಪಂಡಿತರೆ, ಈಗಲೇ ಹೋಗಿ ಅದೇ ಸ್ಥಳದಲ್ಲಿ ಹುಡುಕಿ ಇನ್ನೊಂದು ಬಳೆ ತನ್ನಿ. ಒಂದು ಇದ್ದ ಮೇಲೆ ಜೊತೆಯಾಗಿ ಇನ್ನೊಂದು ಇರಲೇ ಬೇಕಲ್ಲವೇ. ತಡ ಮಾಡಬೇಡಿ. ನಾಳೆ ಸಂಜೆಯ ಒಳಗೆ ತಂದುಕೊಟ್ಟುಬಿಡಿ. ಇದು ರಾಣಿಯ ಅಪೇಕ್ಷೆ. ಹಾಗಾಗಿ ಆದೇಶಿಸುತ್ತಿದ್ದೇನೆ' ಎಂದು ಬಿಟ್ಟ. ಈಗ ಪಂಡಿತನಿಗೆ ದಿಗಿಲಾಯಿತು. ‘ಎಲ್ಲಿಂದ ತರಲಿ ಇನ್ನೊಂದು ಕಡಗವನ್ನು. ಏನೋ ಮಾಡಲು ಹೋಗಿ ಏನೋ ಆಗಿ ಹೋಯಿತಲ್ಲ. ರಾಜಾಜ್ಞೆಯನ್ನು ಮೀರುವುದುಂಟೇ?' ಎಂದು ತತ್ತರಿಸಿ ಹೋದ. ಬಹುವಾಗಿ ಯೋಚಿಸಿದ ಮೇಲೆ ಆತನಿಗೆ ರಯಿದಾಸನೇ ಇದಕ್ಕೊಂದು ಪರಿಹಾರ ಸೂಚಿಸಬಲ್ಲ ಎಂದೆನಿಸಿತು. ಆತ ಕೂಡಲೇ ರಯಿದಾಸನ ಬಳಿಗೆ ಓಡೋಡಿ ಬಂದ. ಆತನ ಕಾಲಿಗೆ ಅಡ್ಡ ಬಿದ್ದು ನಡೆದ ಕತೆಯನ್ನೆಲ್ಲಾ ಹೇಳಿದ.‘ರಯಿದಾಸರೇ, ನನ್ನಿಂದ ತಪ್ಪಾಗಿ ಹೋಗಿದೆ. ನೀವೇ ನನಗೊಂದು ದಾರಿತೋರಿ ಕಾಪಾಡಬೇಕು' ಎಂದು ಗೋಳಿಟ್ಟ. ರಯಿದಾಸ ಪಂಡಿತನನ್ನು ಸಂತ್ಯೆಯಿಸುತ್ತಾ ‘ಇಷ್ಟೇ ತಾನೆ, ನಾನುನಿಮ್ಮ ಕಷ್ಟವನ್ನುಪರಿಹರಿಸುತ್ತೇನೆ' ಎಂದ. ಆತ ಚರ್ಮವನ್ನುಹದ ಗೊಳಿಸಲುಬಳಸುವನೀರಿನ ತೊಟ್ಟಿಯಲ್ಲಿ ಕೈಹಾಕಿ ತಡಕಾಡಿ ಗಂಗೆನೀಡಿದ ಕಡಗದಪಡಿಯಚ್ಚಿನಂತಿದ್ದ ಇನ್ನೊಂದು ಕಡಗಹೊರ ತೆಗೆದ. ಅದನ್ನುಪಂಡಿತನಿಗೆನೀಡಿ ‘ಇದೇ ಅಲ್ಲವೇನೀವುಬಯಸುವ ಕಡಗ' ಎಂದ. ಪಂಡಿತ ಈ ಚಮತ್ಕಾರವನ್ನು ಕಂಡು ಮೂಕನಾಗಿ ಬಿಟ್ಟ. ಅವನ ಕಣ್ಣಿಂದ ಅವಿರತವಾಗಿ ಅಶ್ರುಧಾರೆ ಹರಿಯುತ್ತಿತ್ತು. ಆತ ‘ರಯಿದಾಸರೇ ಈ ಪಾಮರನನ್ನು ಕ್ಷಮಿಸಿಬಿಡಿ. ಈದೆಲ್ಲಾ ಹೇಗಾಯಿತೆಂದು ನನಗೆ ತಿಳಿಸಿ. ಈ ಮೂಢನ ಬುದ್ಧಿಗೆ ಇವೆಲ್ಲಾ ನಿಲುಕುವಂತಹುದಲ್ಲ’ ಎಂದು ಬೇಡಿದ. ರಯಿದಾಸರು ‘ಪಂಡಿತರೇ, ಇದರಲ್ಲಿ ಪವಾಡವೇನು ಇಲ್ಲ, make it seen by seen

评论

加载中...